Submission 3784

ಎದೆಗಿಳಿದ ಅಪ್ಸರೆ

ರಚನೆ : ಉಲ್ಲಾಸ್ ಎಸ್

----------------------------------

ಮೊದಲ ಸಲ ನಿನ್ನಂದವ ನೋಡಿ ಶೃತಿಗೊಂಡಿತು ಮೈಮನ, ಹುಣ್ಣಿಮೆಯ ಚಂದ್ರನನ್ನೂ ತೂಗುವ ನಿನ್ನ ವದನ, ನೀನೆಂದರೆ ಸೌಂದರ್ಯ ಮ ಗಾಂಭೀರ್ಯದ ಸಮ್ಮಿಲನ. ಗಂಧರ್ವ ಲೋಕದಲ್ಲಿ ಮಿಂದೆದ್ದಿರುವ ಮಾನಸಪುತ್ರಿಯೇ, ಕೋಟಿ ನಕ್ಷತ್ರಗಳ ಕಾಂತಿಯಿರುವ ಮೇಘಮಂದಾರವೇ, ಹಾಲ್ಗಡಲ ಹಾದಿಯಲಿ ಈಗಷ್ಟೇ ಅರಳಿರುವ ಅಂಜುಮಲ್ಲಿಗೆಯೇ, ವರ್ಣಿಸಲು ವರ್ಣಮಾಲೆಗೆ ನಿಲುಕದ ಚಂದಿರವರ್ಣೆಯೇ, ನೀ ನವಿರಾದ ನೋಟಕೆ ನಯನಾ ಅಧ್ಬುತ, ನೈದಿಲೆಯನ್ನೂ ಮೀರಿಸುವ ನಿರಂತರ ಸೆಳೆತ, ನೆನಪಿನಂಗಳದಲ್ಲಿ ನೀ ಎಂದೆಂದಿಗೂ ಶಾಶ್ವತ ಶಾಶ್ವತ.

----------------------------------

ನೋಂದಣಿ ಐಡಿ : KPFS2-7600

490
Votes
1,872
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top