Submission 3736

ಸಾಂಗತ್ಯ

ರಚನೆ : ಮೈತ್ರಿ ಭಟ್ ವಿಟ್ಲ

----------------------------------

ವರುಷಗಳು ಸಂದಿಹವು ದಿನಗಳನು ಎಣಿಸದೆಯೇ ಕಳೆದ ಕಾಲದ ಪರಿವೆ ಇಲ್ಲದೇನೇ ll ಕಾಲವದು ಉರುಳಿಹುದು ಹರುಷವದು ಮರಳಿಹುದು ಕಳೆದ ಸಖ್ಯದ ನೆನಪಲೇನೇ ll ಒಂದಿಷ್ಟು ಹುಸಿ ಮುನಿಸು ಒಂದಿಷ್ಟು ಏಕಾಂತ ಗಂಧ ಚೆಲ್ಲುವ ಹೂ ಹಾದಿಯಲೇನೇ ll ಅರಳಿದ ಕನಸುಗಳಿಗೆ ಮುನ್ನುಡಿಯ ಬರೆಯುತಿಹ ಹೊಂಗಿರಣದ ಕಾಂತಿ ನಿನ್ನದೇನೇ ll ಕಲ್ಪನೆಗೆ ಜೀವ ತುಂಬುತಿಹ ಅರಳು ಮಲ್ಲಿಗೆಯಂತೆ ಚೆಲ್ಲೊ ಬೆಳಗಿನ ಭಾವ ನಿನ್ನದೇನೇ ll

----------------------------------

ನೋಂದಣಿ ಐಡಿ : KPFS2-7566

0
Votes
102
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top