Submission 3326

ಹೆಮ್ಗೆಂಪು ಮಳೆ

ರಚನೆ : ಗೋಳೂರ ನಾರಾಯಣಸ್ವಾಮಿ

----------------------------------

ರಾತ್ರಿ ಪೂರ್ತಿ ಮಳೆ ಅಳುತ್ತಿತ್ತು; ಘನಘೋರ ಸದ್ದಿನೊಂದಿಗೆ ಬಂದ ಮಳೆ ಪಟ್ಟುಬಿಡದೆ ಕಣ್ಣೀರು ಸುರಿಸುತ್ತಿತ್ತು! ಈ ಮಳೆಯೂ ಗಿಬ್ರಾನ್ ಕವಿಯ ದೂರದ ಲೆಬನಾನ್‌ನಿಂದಲೂ ಗಾಜಾದಿಂದಲೂ ಬಂದು ನೇರವಾಗಿ ಮಣಿಪುರ ತಲುಪಿತ್ತು! ಹಿಂದೆ ನಾನು ಚಿಕ್ಕವನಾಗಿದ್ದಾಗ ಕಾರ್ಗಿಲ್‌ನಿಂದಲೂ ಈ ಮಳೆ ಬಂದಿತ್ತು. ನಾನಾಗ ಇಸ್ಕೂಲಿನಿಂದ ಮನೆಗೆ ಹೋಗುವಾಗ ಈ ಮಳೆಯಲಿ ನೆನೆದು ನನ್ನ ಎಳೆ ಹೃದಯ ನೊಂದುಹೋಗಿತ್ತು! ಈಗ ಮತ್ತೆ ಅದೇ ಮಳೆ ಬಂದಿದೆ: ದುಃಖದ ಕಡಲಲಿ, ಸಾವಿನ ಉತ್ಸವ ನಡೆಸಿದೆ! ಮನುಜ ನಾಳೆಯ ಉಳಿಸು.

----------------------------------

ನೋಂದಣಿ ಐಡಿ : KPFS2-7259

15
Votes
216
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top