Submission 3292

ಸಾರ್ಥಕ ಜೀವನ

ರಚನೆ : ಯೋಗೇಶ್ವರಿ ಆರ್ ಎಸ್

----------------------------------

ಯಾರಿಗೂ ಕೇಡೆಣಿಸದ ಮನ, ಎಲ್ಲರೊಳಗೊಂದಾಗುವ ಗುಣ, ಇತರರ ಒಳಿತಿಗಾಗಿ ಮಿಡಿಯುವ ಒಳ್ಳೆಯತನ, ಪ್ರೀತಿ,ಪ್ರೇಮ, ಸ್ನೇಹಕ್ಕೊಂದಷ್ಟು ಜನ, ಅಂದುಕೊಂಡಿದ್ದನ್ನು ಸಾಧಿಸಲು ತೊಟ್ಟಿರುವ ಪಣ, ಕಷ್ಟಕಾಲದಲ್ಲಿ ಖರ್ಚಿಗೊಂದಷ್ಟು ಹಣ, ನೋವಲ್ಲು ನಗು ತರಿಸುವ ಆತ್ಮೀಯ ಬಂಧನ, ಇಷ್ಟಿದ್ದರೆ ಸಾಕು ಸಾಗುವುದು ನೆಮ್ಮದಿಯ ಬಾಳ ಪಯಣ. ಇತರರಿಗೆ ಒಳಿತು ಮಾಡಿ ತೀರಿಸಬೇಕು ಭೂಮಿಯ ಋಣ; ಅದುವೇ ಸಾವಿನಲ್ಲೂ ದೊರೆತ ಸಾರ್ಥಕ ಕ್ಷಣ

----------------------------------

ನೋಂದಣಿ ಐಡಿ : KPFS2-7229

33
Votes
274
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top