Submission 3290

ನಾವು ಮನುಷ್ಯರು

ರಚನೆ : ಚೇತನ್ ದೊಡ್ಡಯ್ಯ

----------------------------------

ನಮ್ಮಲ್ಲೂ ಹರಿವುದು ಕೆಂಪು ನೆತ್ತರೆ ಹೊರತು ಪಂಚಮರೆಂಬ ಕೀಳರಿಮೆಯ ನೆತ್ತರಲ್ಲ ನಿಮ್ಮ ಗುಡಿಗೋಪುರಗಳಿಗೆ ದುಡಿವಾಳುಗಳು ನಾವು ನಿಮ್ಮ ಹೊಲಗದ್ದೆಗಳ ಶ್ರಮದ ಎತ್ತುಗಳು ನಾವು ನಿಮ್ಮ ಫಸಲಿನ ಫಲದ ಪರಿಶ್ರಮ ನಾವು ಆದರೂ ಮನೆಮನಗಳಲ್ಲಿ ದಿಕ್ಕರಿಸುವಿರಿ ಇವರು ಹೊಲೆಯ ಮಾದಿಗರೆಂದು ನೀ ಹೊಲೆಯ ಅಲ್ಲೆ ನಿಲ್ಲು ನೀ ಮಾದಿಗ ಇಲ್ಲೆ ಇರು ಎಂಬ ಹೊಲಸು ಮನಸೇಕೆ ಕಾಲದ ಬಿಲ್ಲಿಗೆ ಬಾಣವೆ ಆಧುನಿಕತೆ ಆದರೂ ಇನ್ನು ಬಿಗಿಯುವಿರೇಕೆ ಜಾತಿಯ ಕುಣಿಕೆ ಬುದ್ದ ಬಸವ ಬಂದರೂ ಸರಿದಿಲ್ಲ ಮೇಲುಕೀಳಿನ ಹೊದಿಕೆ ಸಂವಿಧಾನದಲ್ಲಿ ನಲಿದು ಸಮಾಜದಲ್ಲಿ ನರಳುತ್ತಿದೆ ಸಮಾನತೆ ಬೇಡುತ್ತಿಲ್ಲ ಸಮಾನತೆಯ ಕೊಡಿ ಎಂದು ಎಚ್ಚರಗೊಳಿಸುತ್ತಿದ್ದೇವೆ ನಿಮ್ಮ ನೆಲೆಯನ್ನಾಳುತ್ತೇವೆಂದು ನೀವೇಷ್ಟೇ ಕಾಲೇಳೆದು ಬೂಟ ಮೆಟ್ಟಿನಿಂದ ತುಳಿದರೂ ಅಕ್ಷರಕ್ರಾಂತಿಯಿಂದ ನಮ್ಮ ಬುದ್ಧಿ ಭಾವಗಳು ಚುರುಕಾಗಿವೆ ಇಂದು.

----------------------------------

ನೋಂದಣಿ ಐಡಿ : KPFS2-7228

134
Votes
702
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top