ಸಾಂಗತ್ಯ
ರಚನೆ : ರೇಶ್ಮಾ ಗುಳೇದಗುಡ್ಡಾಕರ್
----------------------------------
ನನ್ನೊಳಗಿನ ನಾನು ನಿನ್ನೊಳಗಿನ ನೀನು ಒಂದಾದೆವು ಎಂಬ ಈ ಕಾಲ್ಪನಿಕ ಭೇಟಿಗೆ ... ಮೀರುವೆಯ ನಿನ್ನೊಳಗಿನ ಕಟ್ಟಳೆಗಳ ? ಹೃದಯದ ಮಾತು ಒಪ್ಪಿಗೆ ಯಾದರೆ ಬುದ್ಧಿಯ ಸಮೀಕರಣವನ್ನು ದೂರ ಸರಿಸುವೆಯಾ? ಅಥವಾ ಆಕಾಶ , ಭಾನು, ಚಂದ್ರ ಪಶು, ಪಕ್ಷಿ ,ಗಿಡ ಮರಗಳಿಗೆ ಬೇಕಿಲ್ಲದ ಒಡಂಬಡಿಕೆಗಳ ನಮಗೆ ಬೇಕು ಎನ್ನುವೆಯಾ? ಹೆಣ್ಣು - ಗಂಡು ಎಂಬ ಸೆಳೆತವ ಮರ್ಧಿಸಿ , ಮನುಷ್ಯರ ಸಾಂಗತ್ಯವ ವಾಸ್ತವದಲ್ಲಿ ನೀನು ನಿರ್ಧರಿಸುವೆಯಾ?
----------------------------------
ನೋಂದಣಿ ಐಡಿ : KPFS2-7203