ನನ್ನ ಅಂತರಾಳ
ರಚನೆ : ಜ್ಯೋತಿ ಉಮೇಶ್
----------------------------------
ಅರಿತವರಾರಿಲ್ಲ ನನ್ನ ಅಂತರಾಳವ ಕೇಳುವವರಾರಿಲ್ಲ ನನ್ನ ಮನದ ನೋವಾ... ನಾ ನಿನ್ನಿಂದ ಬಯಸಿದ್ದು ಕೇವಲ ಹಿಡಿಯಷ್ಟು ಪ್ರೀತಿ, ನಿನ್ನ ಸನಿಹ.. ಒಂದೆರಡು ಸಾಂತ್ವನದ ಮಾತುಗಳನ್ನು... ಆದರೆ ನೀ ನನ್ನ ಅಸ್ತಿತ್ವವನ್ನೇ ಸಂಪೂರ್ಣ ನಿರ್ಲಕ್ಷಿಸುತ್ತಿರುವೆ... ನೀ ನನ್ನ ಜೊತೆಯಿರ ಬಯಸಿದ್ದು ಕೇವಲ ನಿನ್ನ ಅವಶ್ಯಕತೆಗಳಿಗೆ.... ನಾ ನಿನ್ನೊಡನೆ ಇರುವುದು ನನ್ನ ಹೆತ್ತವರಿಗೆ ನೋವಾಗಬಾರದೆಂಬ ಅನಿವಾರ್ಯತೆಗೆ.... ಅವಶ್ಯಕತೆ - ಅನಿವಾರ್ಯತೆಗಳ ನಡುವೆ ಇರುವ ವ್ಯತ್ಯಾಸದ ಕಂದಕವ ನೀ ಅರಿಯದೆ ಸೋತಿರುವೆ..... ನೀ ಸೋತು ನನ್ನ ಅಲ್ಲಿ ಸಾಯಿಸಿರುವೆ..
----------------------------------
ನೋಂದಣಿ ಐಡಿ : KPFS2-7186