Submission 3152

ನೆನೆವುದೆನ್ನ ಮನ

ರಚನೆ : ರಂಗರಾಜು ಎ ಸಿ

----------------------------------

ರನ್ನ ಜನಿಸಿದ ನಾಡು ಬಸವನುದಿಸಿದ ಬೀಡು ತಾಯ್ನಾಡು ಕರುನಾಡು ನಿಚ್ಚಳೊಲವಿನಗೂಡು ಅಕ್ಕ ಬದುಕಿದ ನಾಡು ಪಂಪನೊಲವಿನಬೀಡು ಒಲುಮೆಯನೆ ತೈಲವಾಗಿ ಎರೆದಿಹರು ನೋಡು ಕನಕ ನಡೆದ ನಾಡು ಶರೀಫರುಟ್ಟಿದ ಬೀಡು ಹೆಗಲೆಣೆಗೆ ಅಗಣಿತ ಸ್ನೇಹ ಜೊತೆಯಾಗುವುದ ನೋಡು ಪುಟ್ಟಪ್ಪ ಬೇಂದ್ರೆಯಜ್ಜನ ಕಂಪು ಮನಗಳಲ್ಲಿ ಕಾರಂತ, ಕಾರ್ನಾಡ ತೇಜಸ್ವಿ ಲಂಕೇಶರ ಅನಂತ ನೆನಪುಗಳಲ್ಲಿ ಗೌರಿ ಕಲಬುರ್ಗಿ ಸಿದ್ದಲಿಂಗಯ್ಯರ ಅರಿವು ಎದೆಗಳಲಿ ಈ ಸರ್ವಜನಗಳ ಶಾಂತಿಯ ತೋಟದಲ್ಲಿ ನುಡಿಯ ಗುಡಿಯಲಿಹ ತಾಯಿ ಭುವನೇಶ್ವರಿಗೆ ಅದೆಷ್ಟು ಜನ ದಾಸಶ್ರೇಷ್ಠರು ಕನಕಪುರಂದರ ವಿಜಯರು ಕನಸನುಣಿಸುವ ತತ್ವ ದೂರವಾಗಿಸಿ ನನಸಾಗಿಸುವ ಸತ್ವ ಮೈದುಂಬಿಸಿ ಮೊಗದೋರಿಹರು ತಮ್ಮೊಳಗಿನ ವಿಶ್ವಪ್ರೇಮವ ಸಾರಿಹರು.

----------------------------------

ನೋಂದಣಿ ಐಡಿ : KPFS2-7134

3
Votes
119
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top