Submission 3140

ಮನಸೇ

ರಚನೆ : ಜನಾರ್ದನ ಭಟ್ಕಳ

----------------------------------

ಮನಸೇ ನೀನು ಬುದ್ಧನಾಗು ಮನಸೇ ನೀನು ಶುದ್ಧನಾಗು ಆತ್ಮಸಾಕ್ಷಿಯ ಪಥದಿ ಸಾಗು ಯಾರ ಹೊಗಳಿಕೆ ಬಯಸದೆ ಮನಸೇ ನೀನು ತಂಬೂರಿಯಾಗು ಒಳ್ಳೆ ನಾದವ ನುಡಿಸುವಂತಾಗು ಕರ್ಣಾನಂದವಗೊಳಿಸಿ ಸಾಗು ಯಾರ ಅನುಮತಿಯ ಬಯಸದೆ. ಮನಸೇ ನೀನು ಸುಮದಂತಾಗು ಮಾನವೀಯತೆಯಲಿ ಅರಳುವಂತಾಗು ಪ್ರೀತಿಯ ಗಂಧವ ಹರಡುವಂತಾಗು ಯಾವ ಫಲವ ಬಯಸದೆ

----------------------------------

ನೋಂದಣಿ ಐಡಿ : KPFS2-7128

5
Votes
128
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top