Submission 3128

ಏಕಾಂಗಿ

ರಚನೆ : ಶ್ರುತಿ ಕೆ ಎನ್

----------------------------------

ಒಂಟಿ ಜೀವದ ಒಬ್ಬಂಟಿ ಬಾಳು ನರಕಕಿಂತ ಹಾಳು, ಇದೆ ನೂರೊಂದು ಗೋಳುಹೇಳಿಕೊಳ್ಳಲು ಇಲ್ಲ ಯಾರು ಸಮಯದ ಪರಿವೆಯಿಲ್ಲ, ಬಾಳೆಂಬ ಹೂವಿಗೆ ಪರಿಮಳವಿಲ್ಲ ಶುಭೋದಯವಾದರೂ ಬೆಳಕು ಬೇಕಿಲ್ಲ, ಆ ಜೀವಕೆ ಎಲ್ಲ ಹೀರುವ ಕತ್ತಲೆಯೇ ಎಲ್ಲಾ ಸುಡು ಬಿಸಿಲು ಮಧ್ಯಾಹ್ನ ಮಾತ್ರ, ಅಲ್ಲಿ ಸುಡುತಿದೆ ಜೀವನದ ಪಾತ್ರ ಯಾರಿಗೆ ಬೇಕು ಈ ಕುಲ ಗೋತ್ರ, ಜೀವನವೆಂಬ ನನಸಿಗೆ ಕನಸಿನ ಛತ್ರ ಮುಸ್ಸಂಜೆಯಾದರು ಮುಪ್ಪು ಬರಲಿಲ್ಲ, ಗಂಟೆಗಳುರುಳಿದರು ಕಾಲ ಚೈತ್ರ ಉರುಳಲಿಲ್ಲ ಜೀವವಿದ್ದರೂ ಜೀವನ ಬೇಕಿಲ್ಲ, ಕೂಡಿ ನಲಿದು ಸುಖವಾಗಿರು ಎಂದು ಯಾರು ಹರಸಿಲ್ಲ ಮೋಡ ಮುಸುಕಿದರೆ ಮನದೊಳಗೆ ತತ್ತರ, ಮುದ್ದು ಚಂದಿರನೋ ತಲುಪದಷ್ಟೂ ಎತ್ತರ ಬೆಳದಿಂಗಳನೊಮ್ಮೆ ಕಾಣಲು ಕಾತರ, ಹೃದಯದ ಈ ಏಕಾಂಗಿತನಕ್ಕೆ ಎಲ್ಲಿದೆ ಉತ್ತರ

----------------------------------

ನೋಂದಣಿ ಐಡಿ : KPFS2-7114

1
Votes
98
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top