Submission 3066

ಓ ಮನಸೇ....

ರಚನೆ : ರೇಣುಕಾ ಪ್ರಮೋದ್ ಮುಧೋಳ

----------------------------------

ಓ ಮನಸೇ.. ಏಕೆ ಮಂಕಾಗಿಹೆ ನೀನು ಏನು ನಿನ್ನಾ ಈ ಚಿಂತೆ, ನೀ ಹೇಳದೆ ಹೀಗಿದ್ದರೆ, ಹೇಗೆ ನಾನೂ.. ತಿಳಿಯಲಿ? ಕಣ್ಣಲ್ಲಿ ಏಕೆ ಈ ಕಣ್ಣೀರ ಬಿಂದು ಹೀಗೇಕೆ ಸುಮ್ಮನೆ ಕಾಡುವೆ ನೀನಿಂದು ಈ ತಳಮಳ ಅತಿಯಾದರೆ ನಾ ತಾನೆ ಹೇಗೇ ಸಹಿಸಲಿ? ಏತಕೆ ಈ ಮೌನ.. ನೀ ಹೇಳೆಯಾ ನಿನ್ನಾಸೆ ಏನೆಂದು ನೀ ತಿಳಿಸೆಯಾ ಈ ಬದುಕಲಿ ಬರಿ ನೋವಾದರೆ ನಲಿವಿಗೆಲ್ಲ ಅರ್ಥ ಎಲ್ಲಿದೆ? ಪ್ರೇಮದಾ ಸುಂದರ ಸ್ವಪ್ನ ನನಸಾಗಬಲ್ಲದೆ ಈ ನಿನ್ನ ಒಲವಿನ ಕೂಗು ಕೊನೆಯಾಗದೇ ಈ ಪ್ರೀತಿಯಾ ಸೆರೆವಾಸದ ಬಿಡುಗಡೆಯ ಕನಸೂ ಸಾಧ್ಯವೇ?

----------------------------------

ನೋಂದಣಿ ಐಡಿ : KPFS2-7057

1
Votes
165
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top