ಪಾಗಲ್ ಪ್ರೇಮಿ
ರಚನೆ : ನಾಗರಾಜ್ ನಿಂಗಪ್ಪ ಶಿವಶಿಂಪಿ
----------------------------------
ಹಂಗ... ಸಿಗತಿಯೆನು ಸ್ವಲ್ಪ ಕುಂತ ಮಾತಾಡೋನು ಸೊಂಟದ ಮ್ಯಾಗಿನ ಕೊಡ, ಜೋಲಿ ತಪ್ಪಿ ಬಿದ್ದ ಸೈಕಲ್, ಬೇಕಂತನ ನನ್ನೆಡೆಗೆ ವಗೆದ ಆ ನೋಟ ಇದರ ಬಗ್ಗೆ ಮಾತಾಡೋದು ಬಾಳ ಐತಿ. ಹಂಗ... ಸಿಗತಿಯೆನು ಸ್ವಲ್ಪ ಕುಂತ ಮಾತಾಡೋನು. ಹಳ್ಳದ ದಂಡಿಮ್ಯಾಗ ಒಣಾಕಿದ ಅರಬಿ, ಬುಕ್ಕದಾಗ ಬಚ್ಚಿಟ್ಟ ಚೀಟಿ, ಅಕ್ಷರ ದುಂಡಗಾಗ್ಲಿ ಅಂಥ ಹಿಡಿದ ಚಿಟ್ಟಿ ಬಗ್ಗೆ ಮಾತಾಡೋದು ಬಾಳ ಐತಿ. ಹಂಗ... ಸಿಗತಿಯೆನು ಸ್ವಲ್ಪ ಕುಂತ ಮಾತಾಡೋನು. ಆಕಾಶ್ಯಾಕ ನೀಲಿ ಐತಿ? ಭೂಮಿ ಯಾಕ ದುಂಡಗೈತಿ? ಸಮುದ್ರ್ಯಾಕ ದೊಡ್ದ ಐತಿ? ಕಾಗಿ ಯಾಕ ಕರ್ರಗೈತಿ? ಇದರ ಬಗ್ಗೆ ಮಾತಾಡೋದು ಬಾಳ ಐತಿ. ಹಂಗ... ಸಿಗತಿಯೆನು ಸ್ವಲ್ಪ ಕುಂತ ಮಾತಾಡೋನು.
----------------------------------
ನೋಂದಣಿ ಐಡಿ : KPFS2-6927