Submission 2814

ಮೌನ

ರಚನೆ : ಭಾರತಿ ಹೆಚ್ ಎಸ್

----------------------------------

ನೆನಪುಗಳ ಹಂದರ ಹೊತ್ತು ಕುಳಿತ ನನಗೆ ಅಂಬರದಲ್ಲಿ ಪ್ರಕಾಶಿಸುತ್ತಿರೊ ನಕ್ಷತ್ರದಂತೆ ನನ್ನ ಬಾಳು ಪ್ರಕಾಶದ ಚಿಲುಮೆಯಾಗದೇಕೆ? ತಿಳಿಯದೆ ಹೋದ ವಿಚಾರಗಳು ಎನಿತೊ ನಗದೆ ಕಳೆದೋದ ದಿನಗಳು ಎನೆತೊ ಮೌನದ ಈ ಒಳ ಮನಸ್ಸು ಮಾತಾಡದೇಕೆ? ಬೆಂಬಿಡದೆ ಕಾಡುವ ನವ್ಯ ಬಯಕೆಗಳು ಮತ್ತೆ ಮತ್ತೆ ಕೈ ಬೀಸಿ ಕರೆಯೊ ಬವಣೆಗಳು ಇವೆಲ್ಲವ ನೀಗಿಸಿ ಸಾಗೊ ದಾರಿ ಸಿಗದೇಕೆ? ತುದಿ ಮೊದಲು ಗೊತ್ತು ಗುರಿಯಿಲ್ಲದ ಜೀವನ ದಿನ ಸರಿದು ಮುಗಿಯದೆ ಸಾಗುತ್ತಿದೆ ಪಯಣ ಆರರಿಯರು ಮಾನವ ಬದುಕಿನ ಯಾನ

----------------------------------

ನೋಂದಣಿ ಐಡಿ : KPFS2-6881

31
Votes
280
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top