ಬೆಳಕು
ರಚನೆ : ಸೌಮ್ಯ ಬಾನಾಡಿ
----------------------------------
ಸಂತೆ ಬೀದಿಯ ತುತ್ತ ತುದಿಯಲಿ ದೀಪಾವಳಿಗೆ ದಿವಟಿಕೆ ಮಾರುವ ನಮಗೆ ಹೊತ್ತಿನ ತುತ್ತಿಗೂ ತತ್ವಾರವಿರುವಾಗ ದೀಪಗಳ ಹಬ್ಬದ ಕಲ್ಪನೆಯಾದರೂ ಸಾಧ್ಯವಾ? ಬದುಕು ಬಯಲಿಗೆ ಬಿದ್ದು ಬರಡಾಗಿರುವಾಗ ಬದಲಾಯಿಸುವ ಬೆಳಕಿನ ಬದುಕುಂಟೆ? ಊರೆಲ್ಲಾ ಬೆಳಗುತಿಹ ದೀಪದ ಸಂಭ್ರಮವೂ! ನಮಗ್ಯಾಕಿಲ್ಲವೆಂದು ದೇವರಾ ಕಿವಿಹಿಂಡಿ ಕೇಳಿಬಿಡಲೇ ಭಾವನೆಗಳ ಪಕ್ಕಕ್ಕಿಟ್ಟು ವಿಧಿಯಾಟಕ್ಕೆಸೋತವರು ನಾವು ಸಾವಿರಾ ಕಷ್ಟಗಳ ಮಧ್ಯಯೂ ನಗುತಿರುವೆವು ಕಣ್ಮನ ತುಂಬಿಕೊಳ್ಳುವ ಮಿನುಗುವ ಬೆಳಕು ಒಂದಲ್ಲ ಒಂದು ದಿನ ಬರುವುದೆಂಬ ನಿರೀಕ್ಷೆಯಲ್ಲಿ ದಿನಗಳ ದುಡುತ್ತಿರುವೆವು.
----------------------------------
ನೋಂದಣಿ ಐಡಿ : KPFS2-6683