ಎಲ್ಲವೂ ಮೌನವೇ
ರಚನೆ : THEERTHAN K P
----------------------------------
ಎಲ್ಲವೂ ಮೌನವೇ ತುಟಿಗಳೆರಡು ನಿಂತಾಗ. ಮನಗಳೆರಡು ಒಡೆದಾಗ. ಹಸಿರ ಕಾಣಬಲ್ಲದೆ ಮರವು ಬೇರುಗಳೆಲ್ಲವೂ ಸತ್ತಾಗ? ಹಾರ ಬಲ್ಲದೆ ಹಕ್ಕಿಯು ರೆಕ್ಕೆಗಳೆರಡು ಸೋತಾಗ? ಬಣ್ಣವೇನಿದೆ ಇಹಕೆ ನೇಸರನಿರಾದಾಗ. ಚಿಗುರಬಹುದೇ ಹಸಿರು ಮಣ್ಣು ನೀರು ಮರೆತಾಗ ? ಎಲ್ಲದಕ್ಕೂ ಯಾವುದೋ ಯಾವ್ಯಾವುದೋ ನಂಟು ನಂಟು, ನಂಟನ್ನು ಮರೆತಾಗ ಪ್ರತಿಯೊಂದಕ್ಕೂ ಸಾವಿನ ಗಂಟು.....
----------------------------------
ನೋಂದಣಿ ಐಡಿ : KPFS2-6298