Submission 1751

ಮಡಿಲ ಮರೆತೆ

ರಚನೆ : ಮಂಜುನಾಥ ಮೇಟಿ

----------------------------------

ಮಾಯೆಯ ಮಡಿಲಲಿ ಬಿದ್ದು ಮಮತೆಯ ಮಡಿಲ ಮರೆತೆ ಮೋಹದ ಬಾಹುಗಳಲಿ ಬೆರೆತು ಶ್ರೀ ರಕ್ಷೆಯ ಬಾಹುಗಳ ತೊರೆದೆ ಹಗಲಗನಸಲಿ ತೇಲಿ ಹೆಗಲ ಕೊಟ್ಟವರ ಮೀರಿ ಬೆಳದಿಂಗಳ ಮತ್ತನು ಸೇರಿ ದಾಟಿದೆ ಹೆತ್ತವರ ಬಂಧನದ ಬೇಲಿ ಬಯಕೆಯ ದಾಹವನು ಬಯಸಿ ಒಡಲೊಳಗಿಟ್ಟವರಿಗೆ ನಿರಾಶೆ ಮೂಡಿಸಿ ನಾನಾದೆ ಜಟಿಲ ಪಥದ ಪ್ರವಾಸಿ ತಪ್ಪಿದ ದಾರಿಗೆ ಜೀವನವೆ ವಿಲಾಸಿ

----------------------------------

ನೋಂದಣಿ ಐಡಿ : KPFS2-6195

31
Votes
211
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top