Submission 1657

ಕನ್ನಡ

ರಚನೆ : ದೀಪ್ತಿ ಎಂ ಎಸ್

----------------------------------

ನಮ್ಮ ಕನ್ನಡ ನಾಡು ಆದರ್ಶಗಳ ಬೀಡು ವಿಶ್ವ ಲಿಪಿಗಳ ರಾಣಿ ಕನ್ನಡ, ಕೇಳಲು ಚಂದ ಹೊಸಗನ್ನಡ ಕನ್ನಡ ನಾಡಿನ ಜೀವನಾಡಿಯಾಗಿರುವಳು ದಕ್ಷಿಣ ಗಂಗೆ ಜೊತೆಗೆ ಪ್ರಯಾಣ ಬೆಳೆಸಿವೆ ಶರಾವತಿ ರಸ ತುಂಗೆ ದಕ್ಷಿಣ ಪಥೇಶ್ವರ ಹರ್ಷವರ್ಧನನ ಪರಾಕ್ರಮ ಹಕ್ಕ ಬುಕ್ಕ ಹಿಮ್ಮಡಿ ಪುಲಿಕೇಶಿ ತ್ರಿವಿಕ್ರಮ ಕೃಷ್ಣದೇವರಾಯನ ಆ ಶ್ರೀಮಂತ ವಿಜಯನಗರ ಒಡೆಯರ ಕಾಣಿಕೆ ಹಸಿರ ಮಾಂಡವ್ಯ ನಗರ ಗಂಗರ ತಲಕಾಡು ಕದಂಬರ ಸಾಹಸದ ಗೂಡು, ಹೊಯ್ಸಳರ ಸಾಂಸ್ಕೃತಿಕ ನಾಡು ಡಂಕಣ ಜಕಣರ ಶಿಲ್ಪಕಲೆಗಳ ಬೀಡು, ಇಂದು ಕನ್ನಡಿಗನೇ ಆಗಿರುವನು ಇಲ್ಲಿ ತಬ್ಬಲಿ ಎಲ್ಲಾ ಕಳೆದು ಇನ್ನಾದರೂ ಕನ್ನಡದ ರಸಬಳ್ಳಿ ಹಬ್ಬಲಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಕಣಕಣದಲ್ಲೂ ಮೊಳಗಲಿ ಕನ್ನಡದ ಡಿಂಡಿಮ

----------------------------------

ನೋಂದಣಿ ಐಡಿ : KPFS2-6145

1,241
Votes
7,915
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top