ಬಡವನ ಪಾತ್ರ
ರಚನೆ : ಸುದೀಪ್ ಆರ್
----------------------------------
ಬದುಕಿನ ನಾಟಕದಲ್ಲಿ ಇವನದೊಂದು ಕಷ್ಟದ ಪಾತ್ರ... ಸಮಸ್ಯೆಯನ್ನು ಎದುರಿಸಬೇಕು ನೋವನ್ನು ನುಂಗಬೇಕು ಧಣಿಗಳ ಆಳಾಗಬೇಕು ಸಂತೋಷವನ್ನು ಹುಡುಕಬೇಕು ಹಸಿವನ್ನು ಮರೆಯಬೇಕು ದೇವರನ್ನು ದಿನ ನೆನೆಯಬೇಕು.. ಮುಗಿಯದ ನಾಟಕದಲ್ಲಿ ಬಣ್ಣದೊಂದಿಗೆ ಅಂಟಿಕೊಂಡು ಸಮಾಜದ ಟೀಕೆಯ ಬಾಣವನ್ನು ಎದೆಗೆ ತಾಕಿಸಿಕೊಂಡು ಕಣ್ಣಿರಲಿ ಕೈ ತೊಳೆವನು ತನ್ನ ಕುಟುಂಬವ ಯೋಚಿಸಿಕೊಂಡು... ಪರದೆ ಎಳೆಯುವ ಮುನ್ನ ಪಾತ್ರ ಬದಲಿಸು ಬಡವ.. ಪಾತ್ರ ಬದಲಿಸುವ ಮುನ್ನ ಪಡು ನೀ ಅಗಾಧ ಶ್ರಮವ.. ಶ್ರಮದ ಪಾತ್ರ ಶ್ರದ್ಧೆಯಿಂದ ಮಾಡಿದರೆ ನೀನೇ ಧನಿಕ ಮಾನವ..
----------------------------------
ನೋಂದಣಿ ಐಡಿ : KPFS2-6144