ಮೌನ ಸಂಘರ್ಷ
ರಚನೆ : ಶ್ರಾವಂತಿ ಸಿರಿ
----------------------------------
ಇಷ್ಟೂ ವರ್ಷಗಳು..ಇದ್ದದ್ದು ಮೌನ ಸಂಘರ್ಷ! ಅದೆಷ್ಟೋ ಆಕ್ರೋಶಗಳು..ಮೌನ ತಾಳಿದವು ಉಮ್ಮಳಿಸಿ ಬಂದಿದ್ದ ಕೋಪ ತಾಪಗಳು ಮೌನಕ್ಕೆ ಸಿಕ್ಕವು.. ಎಲ್ಲಾ ಮಾತುಗಳು ಮೌನದಲ್ಲಿ ಅರ್ಪಿತಗೊಂಡವು ಇದ್ದಲ್ಲೇ ಗುದ್ದಾಡಿ ಹೊಡೆದಾಡಿಕೊಂಡವು ಸ್ವತಃ ನೋವು ಕೊಟ್ಟು, ಹಿಂಸಿಸಿ ಆತ್ಮವನ್ನು ಪರಮಾತ್ಮನಿಗೆ ಮಾರಿಕೊಂಡು ಹರಸಿ ದೇವರನು ಹೊರಟಿತು ನ್ಯಾಯ ಕೇಳಲು, ಈ ಮೌನಕ್ಕೆ ಅರಿವಿಲ್ಲ ಈ ದೇವನು ಮೂಕ! ಅವನು ಮೌನ ಸಂಘರ್ಷಗಳ ವೀಕ್ಷಿಸುತ್ತಿರುವನು ಮೌನವಾಗೇ ಉರುಳಿದ ಕಾಲಚಕ್ರದೊಳಗೆ ನಾವೆಲ್ಲಾ ಉರುಳಿಬಿದ್ದೆವು ಮೌನದ ಮಡುಗಟ್ಟಿದ ದುಖಃದೀ ಸಾವಿನ ಬಾಯಿ ಮುಚ್ಚಿಸದ ಮಾತುಗಾರರು ಮೌನ ತಾಳಿದರೊಮ್ಮೆ ಏನಾಯ್ತು? ಸಾವಿನ ಬಾಯಿ ಮುಚ್ಚದೆ ತೆರೆದೇ ಇದೆ.! ಇನ್ನಾದರೂ ಬಾಯಿ ಮುಚ್ಚಲು ಮೌನ ಮಾತನಾಡುವುದೊಂದೇ ಬಾಕಿ ಆದರೂ ಸಾವಿಗಿಲ್ಲ ಕನಿಕರ ಮೌನದಿ ಪ್ರಾಣವು ಹಾರಿತು.. ಸಂಘರ್ಷವು ಕೊನೆಗೊಂಡಿತು.
----------------------------------
ನೋಂದಣಿ ಐಡಿ : KPFS2-6141