ನನ್ನವನು
ರಚನೆ : ಲಕ್ಷ್ಮೀ
----------------------------------
ನೀ ದೂರಾದಾಗ ಏನೋ ತಳಮಳ ನನ್ನಲ್ಲಿ ಹತ್ತಿರ ಇದ್ದಗಾ ಮಾತುಗಳೆಲ್ಲಿ, ಎಲ್ಲಾ ನನ್ನ ದಿನಚರಿ ಒಪ್ಪಿಸುವೆ ನಿನ್ನಲ್ಲಿ ಕಿವಿಕೊಟ್ಟೂ ಕೇಳುವೆಯಾ ಒಮ್ಮೆ ನೀ ನನ್ನಲ್ಲಿ, ನೀ ಕಾಣದಾಗ ನಿನ್ನ ಹುಡುಕುವ ಕಣ್ಣುಗಳು ಎದುರಲ್ಲಿ ನೀ ನಿಂತಾಗ ದಿಕ್ಕುಗಳ ನೋಡಿವೆ, ನಿನ್ನ ಬಳಿ ಹೇಳಬೇಕೆಂದಿದ್ದ ವಿಷಯಗಳು ಕಂಗಾಲಾಗಿ ಅರ್ಥವಿಲ್ಲದೆ ಓಡಿವೆ, ನೀನ್ನೊಟ್ಟಿಗೆ ಹೀಗೆ ಇರಬೇಕೆಂಬ ಕಲ್ಪನೆ ನಿನ್ನ ಕಂಡಾಗ ಮರೆಯಾಗಿದೆ, ಕೈಹಿಡಿದು ದಾರಿಯಲಿ ಸಾಗಬೇಕೆಂಬ ಭಾವನೆ ನಿನ್ನ ಉತ್ತರ ಸಿಗದೆ ಹಿಂಜರುಗಿದೆ, ನಾ..... ಎಲ್ಲಾ ನನ್ನ ದಿನಚರಿ ಒಪ್ಪಿಸುವೆ ನಿನ್ನಲ್ಲಿ ಕಿವಿಕೊಟ್ಟೂ ಕೇಳುವೆಯಾ ಒಮ್ಮೆ ನೀ ನನ್ನಲ್ಲಿ.
----------------------------------
ನೋಂದಣಿ ಐಡಿ : KPFS2-6027